Monday, March 17, 2008
ಪಾಂಚಾಲಿ!!(ದ್ರೌಪದಿ)
ಪಾಂಚಾಲಿ ನಿಭಾಯಿಸಿದುದೇಗೆ
ನೀನಲ್ಲಿ?
ಐದು ಜನ ಒಮ್ಮೆಗೆ ಕೇಳಲು
ನಿನ್ನಲ್ಲಿ,
ಕರವಸ್ತ್ರವು ಬೇಕೆಂದು
ನೆಗಡಿಯಲ್ಲಿ.
ಪಂಚೆ ಹರಿದುಕೊಟ್ಟೆಯ
ಪಂಚಮರಿಗಲ್ಲಿ?
ಅಥವ ಹೊಲಿಸಿಕೊಟ್ಟಿರ ಬೇಕು
ರೇಶ್ಮೆ ಬಟ್ಟೆಯಲಿ.
ಇದ್ದರೇನಂತೀಗ ಆಳುಕಾಳುಗಳು
ಮನೆಯಲ್ಲಿ?
ಒಬ್ಬರನ್ನ ಸುಧಾರಿಸುವುದೇ ಕಷ್ಟವೆನ್ನುವ
ಈ ಧರೆಯಲ್ಲಿ.
ನಿಭಾಯಿಸಿದುದೇಗೆ ನೀನಲ್ಲಿ?
ಅಂದಲ್ಲಿ?
ಕನ್ನಡದ ಸಂಧಿಗಳು ಮತ್ತು ಸಂಸಾರದ ಬಂಧಿಗಳು!!
ಕನ್ನಡದ ಭಾಷೆಯಲ್ಲಿ ಆಗಮ ಸಂಧಿ, ಆದೇಶ ಸಂಧಿ ಹೀಗೆ ಹಲವು ವಿಧವಾದ ಸಂಧಿಗಳಿವೆ.ಜೀವನದಲ್ಲಿ ಬರುವ ಕೆಲವು ಸಂಬಂಧ ಸಂಧಿಗಳಿಗೆ ಉದಾಹರಣೆಗಳು ಹೀಗಿವೆ...
ಆಗಮ ಸಂಧಿ ------- ಸೊಸೆಯು ಅತ್ತೆ ಮನೆಗೆ ಪ್ರವೇಶಿಸಿದಾಗ !!
ಆದೇಶ ಸಂಧಿ------ ಹೆಂಡತಿ ಗಂಡನಿಗೆ ತಿಳುವಳಿಕೆ ಮಾತು ಹೇಳಿದಾಗ!!
ಗುಣಸಂಧಿ ------- ಗಂಡ ಮೌನದಿಂದ ಹೆಂಡತಿಯನ್ನು ಹೊಂದಿಕೊಳ್ಳಲು
ಪ್ರಾರಂಭಿಸಿದಾಗ!!
ಲೋಪ ಸಂಧಿ ------ ಸೊಸೆಯ ಕಾರ್ಯಾಚರಣೆಯಲ್ಲಿರುವ ದೋಷಗಳನ್ನು
ಅತ್ತೆಯು ಬೊಟ್ಟು ಮಾಡಿ ತೋರಿಸಿದಾಗ!!
ಸವರ್ಣಧೀರ್ಘ ಸಂಧಿ --- ಮಕ್ಕಳಿಗೆ ತಂದೆ ತಾಯಿ ಇಬ್ಬರೂ ಸೇರಿ
ಬುದ್ದಿಮಾತು ಹೇಳುವಾಗ..
Wednesday, March 12, 2008
ಪ್ರಥಮ ಪ್ರಯತ್ನ!!
ಹೆಂಡತಿಯಾಬ್ಬಳು ಮನೆಯಾಳ್ಗಿದ್ದರೆ.....
ಸುಪ್ರಸಿದ್ದ ಕವಿ ಕೆ.ಎಸ್.ನರಸಿಂಹಸ್ವಾಮಿಯವರ ಗೀತೆಯನ್ನ ಅನುಸರಿಸಿ,ಅದರ ಭಾವಾರ್ಥವನ್ನ ಬದಲಿಸಿ ರಚಿಸಿದ ಒಂದು ಗೀತೆ......
ಹೆಂಡತಿಯಾಬ್ಬಳು ಮನೆಯಾಳ್ಗಿದ್ದರೆ,
ಖರ್ಚೋ ಖರ್ಚು ರುಪಾಯಿ.
ಹೆಂಡತಿಯಾಬ್ಬಳು ಹತ್ತಿರವಿದ್ದರೆ ,
ಕಿಸೆಯಾಗುವುದೂ ಖಾಲಿ!!
ಹೆಂಡತಿಯಾಬ್ಬಳು ಮನೆಯಾಳಗಿದ್ದರೆ,
ಆರದು ಕೋಪದ ದೀಪ.
ಹೆಂಡತಿ ತೌರಿಗೆ ಹೊರಡುವೆನೆಂದರೆ,
ತಗ್ಗಿತು ಖರ್ಚಿನ ತಾಪ!
ಕೈಹಿಡಿದವಳು, ಅಡಿಗೆ ಬರದವಳು,
ಬಿಡುಗಡೆ ಸೌಟಿಗೆ ಅವಳಿಂದಾ.
ರುಚಿರುಚಿಯಾಗಿ ತಿನ್ನಲು ಬಯಸಿ,
ತರಿಸುವೆ ಊಟವ ಹೊಟೆಲ್ನಿಂದಾ!!
ಜಗಳವ ಆಡಲು ನಿಂತಿಹಳಲ್ಲ,
ಮಾತಿಗೆ ಬಡತನವಲ್ಲಾ.
ಮೌನವ್ರತವನೇ ಹಿಡಿವಿದು ಕ್ಷೇಮ,
ಗೆಲ್ಲುವ ಭರವಸೆ ಇಲ್ಲ!!
ಡೈಮಂಡ್ ನೆಕ್ಲೇಸ್ ಬೇಕೆನ್ನುವಳಲ್ಲ,
ಶ್ರೀಮಂತನ ಮಗಳೀ ಬಾಲೆ.
ತರದಿದ್ರೆ ಮಂಗಳಾರ್ತಿ ಎತ್ತುವಳಲ್ಲ
ಹೆಂಡತಿ ಕೋಪದ ಜ್ವಾಲೆ!!
ಹೆಂಡತಿಯಾಬ್ಬಳು ಮನೆಯಾಳ್ಗಿದ್ದರೆ,
ಖರ್ಚೋ ಖರ್ಚು ರುಪಾಯಿ.
ಹೆಂಡತಿಯಾಬ್ಬಳು ಹತ್ತಿರವಿದ್ದರೆ
ಗಂಡನಾದ ಬಡಪಾಯಿ !!
Subscribe to:
Posts (Atom)