Wednesday, March 12, 2008

ಪ್ರಥಮ ಪ್ರಯತ್ನ!!


ಹೆಂಡತಿಯಾಬ್ಬಳು ಮನೆಯಾಳ್ಗಿದ್ದರೆ.....



ಸುಪ್ರಸಿದ್ದ ಕವಿ ಕೆ.ಎಸ್.ನರಸಿಂಹಸ್ವಾಮಿಯವರ ಗೀತೆಯನ್ನ ಅನುಸರಿಸಿ,ಅದರ ಭಾವಾರ್ಥವನ್ನ ಬದಲಿಸಿ ರಚಿಸಿದ ಒಂದು ಗೀತೆ......


ಹೆಂಡತಿಯಾಬ್ಬಳು ಮನೆಯಾಳ್ಗಿದ್ದರೆ,
ಖರ್ಚೋ ಖರ್ಚು ರುಪಾಯಿ.
ಹೆಂಡತಿಯಾಬ್ಬಳು ಹತ್ತಿರವಿದ್ದರೆ ,
ಕಿಸೆಯಾಗುವುದೂ ಖಾಲಿ!!

ಹೆಂಡತಿಯಾಬ್ಬಳು ಮನೆಯಾಳಗಿದ್ದರೆ,
ಆರದು ಕೋಪದ ದೀಪ.
ಹೆಂಡತಿ ತೌರಿಗೆ ಹೊರಡುವೆನೆಂದರೆ,
ತಗ್ಗಿತು ಖರ್ಚಿನ ತಾಪ!


ಕೈಹಿಡಿದವಳು, ಅಡಿಗೆ ಬರದವಳು,
ಬಿಡುಗಡೆ ಸೌಟಿಗೆ ಅವಳಿಂದಾ.
ರುಚಿರುಚಿಯಾಗಿ ತಿನ್ನಲು ಬಯಸಿ,
ತರಿಸುವೆ ಊಟವ ಹೊಟೆಲ್ನಿಂದಾ!!

ಜಗಳವ ಆಡಲು ನಿಂತಿಹಳಲ್ಲ,
ಮಾತಿಗೆ ಬಡತನವಲ್ಲಾ.
ಮೌನವ್ರತವನೇ ಹಿಡಿವಿದು ಕ್ಷೇಮ,
ಗೆಲ್ಲುವ ಭರವಸೆ ಇಲ್ಲ!!

ಡೈಮಂಡ್ ನೆಕ್ಲೇಸ್ ಬೇಕೆನ್ನುವಳಲ್ಲ,
ಶ್ರೀಮಂತನ ಮಗಳೀ ಬಾಲೆ.
ತರದಿದ್ರೆ ಮಂಗಳಾರ್ತಿ ಎತ್ತುವಳಲ್ಲ
ಹೆಂಡತಿ ಕೋಪದ ಜ್ವಾಲೆ!!

ಹೆಂಡತಿಯಾಬ್ಬಳು ಮನೆಯಾಳ್ಗಿದ್ದರೆ,
ಖರ್ಚೋ ಖರ್ಚು ರುಪಾಯಿ.
ಹೆಂಡತಿಯಾಬ್ಬಳು ಹತ್ತಿರವಿದ್ದರೆ
ಗಂಡನಾದ ಬಡಪಾಯಿ !!

2 comments:

bhadra said...

ಅಣುಕು ಕವಿತೆ ಬಹಳ ಸೊಗಸಾಗಿದೆ - ವಸ್ತುಸ್ಥಿತಿಯನ್ನೂ ತೋರುತ್ತಿದೆ
ಬರಹ ನಿಲ್ಲಿಸಬೇಡಿ - ಆಗಾಗ ಬ್ಲಾಗಿನ ಬಾಗಿಲು ಬಡಿಯಲು ಬರುವೆ

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆ

KannadaHanigalu said...

ಆತ್ಮೀಯ ಕನ್ನಡ ಮಿತ್ರರೇ,

ಅಣುಕು ಗೀತೆ ಬಹಳ ಸುಂದರವಾಗಿದೆ. ಕನ್ನಡ ಮನರಂಜನಾ ಲೋಕದಲ್ಲಿ ತನ್ನದೇ ಆದ ಛಾಪಿನಿಂದ, "ಕನ್ನಡಹನಿಗಳು.ಕಾಂ" ಅನೇಕ ಕನ್ನಡಿಗರ ಹೃದಯಗಳನ್ನು ಬೆಸೆಯುತ್ತಿದೆ. ತನ್ನ ನವ ನವೀನ ವಿನ್ಯಾಸದೊಂದಿಗೆ, "ಕನ್ನಡಹನಿಗಳು.ಕಾಂ", ಕರ್ನಾಟಕದ ಹಾಗೂ ವಿಶ್ವದೆಲ್ಲೆಡೆಯ ಕನ್ನಡಿಗರ ಮನೆ-ಮನಗಳನ್ನು ತಲುಪುತ್ತಿದೆ.

ನೀವೂ ಈ ಒಂದು ಪ್ರಯತ್ನವನ್ನು ಪ್ರೋತ್ಸಾಹಿಸುತ್ತೇರೆಂದು ನಂಬಿರುತ್ತೇನೆ.

ನಿಮ್ಮ ಅಣುಕು ಗೀತೆ, ಕವನ, ಹನಿಗವನ, ಇನ್ನೂ ಮುಂತಾದುವುಗಳಿದ್ದರೆ ನಿಮ್ಮ ಹೆಸರಿನೊಂದಿಗೆ ನಮ್ಮಲ್ಲಿ ಪ್ರಕಟಿಸಿ, ಇನ್ನೂ ಹೆಚ್ಚಿನ ಕನ್ನಡ ಸ್ನೇಹಿತರಿಗೆ ತಲುಪಲು ಸಹಾಯ ಮಾಡಿ.

ಈ ಕೆಳಗಿನ ಕೊಂಡಿಯಲ್ಲಿ ನಿಮ್ಮ ಬರಹಗಳನ್ನು ಸೇರಿಸಬಹುದು.

KannadaHanigalu Submit

ಧನ್ಯವಾದಗಳೊಂದಿಗೆ.....
ಕನ್ನಡ ಹನಿಗಳ ಬಳಗ